ಪ್ರೇಮಿಗಳ ಎದೆಯೊಳಗೆ ಒಲವ ನಶೆ ಏರಿಸುವ “ನಲಿವ ಗುಲಾಬಿ ಹೂವೆ”

Date:

  • ಪ್ರೇಮಿಗಳ ಎದೆಯೊಳಗೆ ಒಲವ ನಶೆ ಏರಿಸುವ “ನಲಿವ ಗುಲಾಬಿ ಹೂವೆ”
  • ಪ್ರೀತಿ, ನೆನಪು, ವಿರಹ, ವೇದನೆಯ ರೊಮ್ಯಾಂಟಿಕ್ ಥ್ರಿಲ್ಲರ್ ಹಾಡು
  • ಎಮೋಷನಲ್ ಎಡಿಂಗ್ ನಲ್ಲಿದೆ ಪ್ರೀತಿಯ ಬೂಸ್ಟರ್ ಡೋಸ್

ಪ್ರೀತಿ, ನೆನಪು, ವಿರಹ, ವೇದನೆ ಎಲ್ಲವನ್ನೂ ಆಕರ್ಷಕ ಸ್ಟೈಲ್ ನಲ್ಲಿ ಪ್ರಸ್ತುತಪಡಿಸಿದ “ನಲಿವ ಗುಲಾಬಿ ಹೂವೆ – Naliva Gulabi Hoove” ವಿಡಿಯೋ ಸಾಂಗ್ ಅಬ್ಬರ ಜೋರಾಗಿದೆ. ವಿಡಿಯೋದಲ್ಲಿ ತುಣುಕು ತುಣುಕಾಗಿ ವಿಶಿಷ್ಟ ಕ್ಯೂರಿಯಾಸಿಟಿಯೊಂದಿಗೆ ಕತೆಯೊಂದು ಬಿಚ್ಚಿಕೊಳ್ಳುತ್ತದೆ. ಒಂದಷ್ಟು ಫ್ಲ್ಯಾಶ್ ಬ್ಯಾಕ್ ಗಳು ವಿಡಿಯೋಗೆ ಸಖತ್ ಕಿಕ್ ನೀಡಿದೆ. ಸಾಗರ್ ಗೌಡ Sagar Gowda ಅವರು ಫೀಲಿಂಗ್, ರೊಮ್ಯಾಂಟಿಕ್ ಸೀನ್ ಗಳಲ್ಲಿ ಮಿಂಚಿದ್ದಾರೆ. ಅವರ ನಟನೆಯೇ ವಿಡಿಯೋ ಸಾಂಗ್ ಗೆ ಹೊಸ ಶಕ್ತಿ ತುಂಬಿದೆ. ಅವರಿಗೆ ಜೋಡಿಯಾಗಿ ಸ್ಪೂರ್ತಿ ಪಾಟೀಲ್ Spurthi Patil ಜೊತೆಯಾಗಿದ್ದು ಫೀಲಿಂಗ್ ಮತ್ತು ಎಮೋಷನಲ್ ದೃಶ್ಯಗಳಲ್ಲಿ ಕಾಡುತ್ತಾರೆ.

ಕಿವಿ ಇಂಪೇರಿಸುವ ಮಧುರ ಸಂಗೀತ:

ನಲಿವ ಗುಲಾಬಿ ಹೂವೆ ಎಂದು ಆರಂಭವಾಗುವ ಹಾಡು, ರೆಟ್ರೋ ಶೈಲಿಯಲ್ಲಿ ಸಖತ್ ಜೋಶ್ ಮೂಡಿಸುತ್ತೆ. ದೀಕ್ಷಿತ್ Deekshith ಆಕ್ಷನ್ ಕಟ್ ಹೇಳಿದ್ದು, ಜ್ಯಾಕ್ ಮೈಕಲ್ Jack Michael ಅವರ ಸಂಗೀತ ಸಂಯೋಜನೆ ಕಿವಿಯನ್ನು ಇಂಪೇರಿಸುತ್ತದೆ. ಕೂಲ್ ಪೋಯ್ಸನ್ Kul Poison ಕ್ಯಾಮೆರಾ ಮತ್ತು ಎಡಿಟಿಂಗ್ ಕೈಚಳಕ ಮನಮೋಹಕವಾಗಿದೆ. ಕತೆಯಲ್ಲಿರುವ ಸಡನ್ ಟ್ವಿಸ್ಟ್, ಪ್ರೇಮಿಗಳ ದಿಲ್ ಒಂದು ಕ್ಷಣ ದಸಕ್ಕೆನ್ನಿಸುವಂತಿದೆ. ಎಲ್ಲೆ ಇರಲಿ ಹೇಗೂ ಇರಲಿ ಪ್ರೀತಿಯ ನೆನಪುಗಳು ಗುಲಾಬಿಯಂತೆ ಆವರಿಸಿಕೊಳ್ಳುತ್ತೆ ಅನ್ನೋ ಸಂದೇಶ ಪ್ರೇಮಿಗಳನ್ನು ಥ್ರಿಲ್ ಆಗಿಸುತ್ತೆ. ಸ್ಯಾಡ್ ಎಂಡಿಂಗ್ ಇದ್ದರೂ ಅದರಲ್ಲೊಂದು ರೋಚಕತೆ ಇದೆ. ಅಂತೂ ಪ್ರಸ್ತುತಪಡಿಸಿದ “ನಲಿವ ಗುಲಾಬಿ ಹೂವೆ” ಒಲವ ಮನಸ್ಸುಗಳಿಗೊಂದು ಕಲರ್ ಫುಲ್ ಉಡುಗೊರೆ.

The romantic thriller song Naliva Gulabi Hoove has now been released

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...