ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ರಿಯಲ್ ಕಥಾ ಹಂದರದ ಚಿತ್ರಗಳು

Date:

  • ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ರಿಯಲ್ ಕಥಾ ಹಂದರದ ಚಿತ್ರಗಳು
  • ಸತ್ಯ ಘಟನೆಗಳೇ ಈ ಚಿತ್ರಗಳಿಗೆ ಸ್ಪೂರ್ತಿ
  • ಸಸ್ಪೆನ್ಸ್ ಆಕ್ಷನ್ ಬೆರೆತ ಸತ್ಯ ಕತೆಗಳು

ಕನ್ನಡ ಚಿತ್ರರಂಗದಲ್ಲಿ ಕೆಲವು ಚಿತ್ರಗಳು ಸತ್ಯ ಘಟನೆಯನ್ನಾಧಿಸಿ ಸದ್ದು ಮಾಡಿದೆ. ಅಂತಹ ಕೆಲವೊಂದು ಚಿತ್ರಗಳ ಲಿಸ್ಟ್ ಇಲ್ಲಿದೆ.

ಸೈನೈಡ್

ಎಎಂಆರ್ ರಮೇಶ್ ನಿರ್ದೇಶನದ ಈ ಚಿತ್ರವು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗಳಿಸಿದ ಅತ್ಯುತ್ತಮ ಸಿನಿಮಾ. ಈ ಚಿತ್ರವು ರಾಜೀವ್ ಗಾಂಧಿಯವರ ಹತ್ಯೆಯನ್ನು ಆಧರಿಸಿದೆ. ರವಿ ಕಾಳೆ, ರಂಗಾಯಣ ರಘು, ತಾರಾ, ಮಾಳವಿಕಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರವು 2006 ರಲ್ಲಿ ಬಿಡುಗಡೆಯಾಯಿತು.

ಕಿಲ್ಲಿಂಗ್ ವೀರಪ್ಪನ್

2016 ರಲ್ಲಿ ಬಿಡುಗಡೆಯಾದ ಈ ಚಿತ್ರವು, ಕುಖ್ಯಾತ ಅರಣ್ಯ ದರೋಡೆಕೋರ ವೀರಪ್ಪನ್ ಕತೆ ಆಧರಿಸಿದೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಆ ದಿನಗಳು

ಅಗ್ನಿ ಶ್ರೀಧರ್ ಬರೆದ “ದಾದಗಿರಿಯ ದಿನಗಳು” ಪುಸ್ತಕವನ್ನು ಆಧರಿಸಿದ ಈ ಚಿತ್ರ ನಿಜ ಜೀವನದ ಗ್ಯಾಂಗ್‌ಸ್ಟರ್‌ಗಳಾದ ಕೊತ್ವಾಲ್ ರಾಮಚಂದ್ರ, ಜಯರಾಜ್ ಮತ್ತು 80 ರ ದಶಕದ ಭೂಗತ ಲೋಕದ ಮಾಫಿಯಾಗಳ ಕತೆ ಹೇಳುತ್ತದೆ. ಕೆ.ಎಂ. ಚೈತನ್ಯ ನಿರ್ದೇಶನದ ಈ ಚಿತ್ರದಲ್ಲಿ ಚೇತನ್, ಶರತ್ ಲೋಹಿತಾಶ್ವ, ಆಶಿಶ್ ವಿದ್ಯಾರ್ಥಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಡೆಡ್ಲಿ ಸೋಮ

ಕುಖ್ಯಾತ ದರೋಡೆಕೋರ ಡೆಡ್ಲಿ ಸೋಮನ ನಿಜವಾದ ಕತೆಯಿರುವ ಚಿತ್ರವಿದು. ಮುಗ್ಧ ಹುಡುಗನೊಬ್ಬ ದರೋಡೆಕೋರನಾಗಿ ಬದಲಾದ ಕತೆ ಇಲ್ಲಿದೆ. ಆದಿತ್ಯ, ಡೆಡ್ಲಿ ಸೋಮನಾಗಿ ಕಾಣಿಸಿಕೊಂಡಿದ್ದಾರೆ

ಭೀಮಾ ತೀರದಲ್ಲಿ

2012 ರಲ್ಲಿ ಬಿಡುಗಡೆಯಾದ ಈ ಚಿತ್ರವು ಓಂ ಪ್ರಕಾಶ್ ರಾವ್ ನಿರ್ದೇಶನದ ಆಕ್ಷನ್ ಚಿತ್ರ. ಈ ಚಿತ್ರದ ಕತೆಯೂ ನಿಜ ಜೀವನದ ಅಂಶಗಳನ್ನು ಒಳಗೊಂಡಿದೆ. ಡಕಾಯಿತ ಚಂದ್ರಪ್ಪ ಹರಿಜನ ಅವರ ಕತೆಯಾಗಿದೆ. ಚಿತ್ರದಲ್ಲಿ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...