ಬಳೆಗಳ ಜೊತೆ ಸದ್ದು ಮಾಡ್ತಿದ್ದಾಳೆ “ಬ್ಯಾಂಗಲ್ ಬಂಗಾರಿ”

Date:

  • ಬಳೆಗಳ ಜೊತೆ ಸದ್ದು ಮಾಡ್ತಿದ್ದಾಳೆ “ಬ್ಯಾಂಗಲ್ ಬಂಗಾರಿ”
  • “ಎಕ್ಕ” ಸಿನಿಮಾದ ಲಿರಿಕಲ್ ಹಾಡಿಗೆ ಪ್ರೇಕ್ಷಕ ಸಖತ್ ಖುಷ್
  • ಪ್ರೇಕ್ಷಕನಲ್ಲಿ ಕುತೂಹಲ ಹುಟ್ಟಿಸಿರುವ “ಎಕ್ಕ” ಸಿನಿಮಾ ಜುಲೈ 18 ಕ್ಕೆ ತೆರೆಗಪ್ಪಳಿಸಲಿದೆ.

ರೋಹಿತ್ ಪದಕಿ Rohith Padaki ಆಕ್ಷನ್ ಕಟ್ ಹೇಳಿರುವ, ಯುವ ರಾಜಕುಮಾರ್ Yuva Rajkumar ನಾಯಕ ನಟನಾಗಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರ “ಎಕ್ಕ” Ekka “ಬ್ಯಾಂಗಲ್ ಬಂಗಾರಿ” Bangle Bangari ಎನ್ನುವ ಹಾಡಿನ ಲಿರಿಕಲ್ ವಿಡಿಯೋ ಸಿನಿ ಪ್ರೇಕ್ಷಕರ ಹಾರ್ಟ್ ಬೀಟ್ ಅನ್ನು ಹೆಚ್ಚಿಸುವಂತಿದೆ. ಈಗಾಗಲೇ ಟೈಟಲ್ ಟ್ರ್ಯಾಕ್ ಹಾಗೂ ಟೀಸರ್ ಮೂಲಕ “ಎಕ್ಕ” ಸಿನಿಮಾ ಕುತೂಹಲ ಮೂಡಿಸಿತ್ತು. ವಿಭಿನ್ನವಾದ ನಿರೂಪಣೆ ಇದಾಗಿತ್ತು.

ಟ್ರೆಂಡ್ ಆಗ್ತಿದೆ ಈ ಹಾಡು

ನಾಯಕ ನಟ ತನ್ನ ಪ್ರಿಯತಮೆಯನ್ನು ಬ್ಯಾಂಗಲ್ ಬಂಗಾರಿ ಎಂದು ಕರೆಯುತ್ತ ಪ್ರೇಮಕ್ಕೆ ಆಹ್ವಾನಿಸುವ ಹಾಡು ಸಖತ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ನಾಯಕಿಯರಾಗಿ ಸಂಜನಾ ಆನಂದ್ Sanjana Anand ಮತ್ತು ಸಂಪದಾ Sampada ನಟಿಸಿರುವ ಈ ಚಿತ್ರದ ಹಾಡಿಗೆ ನಾಗಾರ್ಜುನ್ ಶರ್ಮಾ ಅವರ ಸಾಹಿತ್ಯವಿದೆ. ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆ, ಚರಣ್ ರಾಜ್ ಅವರ ಸಂಗೀತದ ಮಾಧುರ್ಯವಿದೆ. ಅಂತೋನಿ ದಾಸನ್ ಮಧುರ ಕಂಠ ನೀಡಿದ್ದಾರೆ.

ಪಿಆರ್ಕೆ, ಜಯಣ್ಣ ಹಾಗೂ ಕೆಆರ್ಜಿ ಸ್ಟುಡಿಯೋ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿರೋ ಈ ಚಿತ್ರದಲ್ಲಿ ಯುವ ರಾಜ್ಕುಮಾರ್ ನಟನೆ ವಿಭಿನ್ನವಾಗಿರಲಿದೆ ಎಂದು ಚಿತ್ರತಂಡ ಈಗಾಗಲೇ ಅನೌನ್ಸ್ ಮಾಡಿದೆ. ಕತೆಯ ವಿಷಯಕ್ಕೆ ಬಂದರೆ ರಕ್ತಮಯ ಜಗತ್ತಿನ ಜೊತೆಜೊತೆಗೆ ಪ್ರೇಮಕಾವ್ಯವೂ ಕತೆಯಲ್ಲಿರಲಿದೆ. ಉಳಿದಂತೆ ಈ ಚಿತ್ರದ ತಾರಾಗಣದಲ್ಲಿ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ಸೃಜನಶೀಲ ಕಲಾವಿದರು ನಟಿಸಿದ್ದಾರೆ. ಪ್ರೇಕ್ಷಕನಲ್ಲಿ ಕುತೂಹಲ ಹುಟ್ಟಿಸಿರುವ ಈ ಸಿನಿಮಾ ಇದೇ ಜುಲೈ 18 ಕ್ಕೆ ತೆರೆಗಪ್ಪಳಿಸಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ ಲಿಸ್ಟ್

ಗಣಪತಿ ಪೆಂಡಾಲ್‌ ನಲ್ಲಿ ಹಾಕಲು ಕನ್ನಡ ಸಿನಿಮಾ ಹಾಡುಗಳನ್ನು ಹುಡುಕ್ತಿದ್ದೀರಾ? ಇಲ್ಲಿದೆ...

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...