ಇಂಜೆಕ್ಷನ್ ಕೊಡೋಕೆ ಇಷ್ಟ ಅಂತ ಡಾಕ್ಟರ್ ಆಗ್ಬೇಕು ಅನ್ಕೊಂಡಿದ್ದವ್ರು ಸಿನಿಮಾ ಫೀಲ್ಡ್ ಗೆ ಬಂದ ಕಥೆ ಇಲ್ಲಿದೆ – Teju Belawadi Life Story In Kannada

Date:

  • ಇಂಜೆಕ್ಷನ್ ಕೊಡೋಕೆ ಇಷ್ಟ ಅಂತ ಡಾಕ್ಟರ್ ಆಗ್ಬೇಕು ಅನ್ಕೊಂಡಿದ್ದವ್ರು ಸಿನಿಮಾ ಫೀಲ್ಡ್ ಗೆ ಬಂದ ಕಥೆ ಇಲ್ಲಿದೆ
  • ಸಿನಿಮಾ ಫೀಲ್ಡ್ ಗೆ ಬರ್ತೀನಿ ಅನ್ನೋ ಊಹೇನೂ ಇಲ್ದೇ ಇದ್ರೂ ಈದೀಗ ಸ್ಯಾಂಡಲ್ ವುಡ್ ನಲ್ಲಿ ಮಿಂಚ್ತಿದಾರೆ
  • ಯೋಗಾಸನದಿಂದ ಫಿಟ್ನೆಸ್ ಮೈಂಟೇನ್ ಮಾಡ್ತಾರೆ “ತೇಜು ಬೆಳವಾಡಿ”

ಕಾಲೇಜು ಸಮಯದಿಂದಲೇ ರಂಗಭೂಮಿಯಲ್ಲಿ ಆಸಕ್ತರಾಗಿದ್ದ, ತೇಜು ಬೆಳವಾಡಿ Teju Belawadi 2016 ರಲ್ಲಿ “ಇದೊಳ್ಳೆ ರಾಮಾಯಣ” Idolle Ramayana ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಅನಂತರ “ಗಂಟುಮೂಟೆ” Gantu Moote ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮುಖ್ಯಭೂಮಿಕೆಯಲ್ಲಿ ಮಿಂಚಿದರು. ಅನಂತರ “ಲಾಫಿಂಗ್ ಬುದ್ಧ”, Laughing Buddha “ಮರ್ಯಾದೆ ಪ್ರಶ್ನೆ” Maryade Prashne ಸಿನಿಮಾಗಳ ಮೂಲಕ ಸಿನಿ ಜರ್ನಿ ಮುಂದುವರೆಸಿದ್ದಾರೆ ಯೋಗ ಹುಡುಗಿ ತೇಜು ಬೆಳವಾಡಿ.

ಹೀಗಿತ್ತಂತೆ ತೇಜು ಬಾಲ್ಯ

ತಮ್ಮ ಬಾಲ್ಯದಲ್ಲಿ ಕ್ಲಾಸಲ್ಲಿ ಕೂರೋದಕ್ಕಿಂತ ಕಾರಿಡಾರ್ ನಲ್ಲಿ ತಿರುಗಾಡ್ಲಿಕ್ಕೆ, ಒಬ್ಬಂಟಿಯಾಗಿ ನಾಯಿಗಳನ್ನು ಮಾತಾಡಿಸ್ಕೊಂಡು ಅಥವಾ ಸೈಕಲ್ ಹೊಡೀತಾ ತಿರುಗಾಡ್ಲಿಕ್ಕೆ ಹೆಚ್ಚು ಇಷ್ಟಪಡ್ತಿದ್ರಂತೆ ಇವ್ರು. ಪುಸ್ತಕಗಳನ್ನ ಓದೋ ಹುಚ್ಚಿದ್ದ ತೇಜು ಅವ್ರಿಗೆ ಎಕ್ಸಾಮ್ ಸಮಯದಲ್ಲೂ ತಲೆಕೆಡಿಸಿಕೊಳ್ಳದೇ ನಾವೆಲ್ ಓದ್ತಾ ಕೂರ್ತಿದ್ರಂತೆ. ಸ್ಟಡೀಸ್ ನಲ್ಲಿ ಇಲ್ದೇ ಇರೋ ಶ್ರದ್ಧೆ ಆಕ್ಟಿಂಗ್ ನಲ್ಲಿ ಇತ್ತು. ನಿನಾಸಂ ನಲ್ಲಿ ಡಿಪ್ಲೊಮಾ ಕೋರ್ಸ್ ಮಾಡ್ತಿದ್ದಾಗ ನನ್ನ ನಿಜವಾದ ಶಕ್ತಿ ಏನು ಅಂತ ತಿಳ್ಕೊಳಕ್ಕೆ ಸಾಧ್ಯ ಆಯ್ತು ಅನ್ನೋ ಇವರು ಹಲವು ನಾಟಕಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಯಾವುದೇ ಸಣ್ಣ ಪಾತ್ರವನ್ನಾದರೂ ಶ್ರದ್ಧೆಯಿಂದ ಮಾಡ್ತಾರಂತೆ

“ಲಾಫಿಂಗ್ ಬುದ್ಧ” ದಲ್ಲಿ ತಾವು ಮಾಡಿದ ಪಾತ್ರದ ಬಗ್ಗೆ, ಅನುಭವದ ಬಗ್ಗೆ ಹಂಚಿಕೊಳ್ತಾ “ಕಥೆ ಇಷ್ಟ ಆದ್ರೆ ಯಾವುದೇ ಸಣ್ಣ ಪಾತ್ರವೇ ಆಗಿರಲಿ ಅಷ್ಟೇ ಶ್ರದ್ಧೆಯಿಂದ ಮಾಡ್ತೀನಿ. ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡೋದೇ ಇಷ್ಟ” ಅಂತಾರೆ ಇವ್ರು. ತಾವೂ ಯೋಗ ಕಲಿಯುತ್ತಾ ಇತರರಿಗೂ ಕಲಿಸ್ತಾ ಇರೋ ಇವ್ರು ಇಂದಿನ ತರಾತುರಿಯ ಯುಗದಲ್ಲಿ ಪ್ರತಿಯೊಬ್ರೂ ಯೋಗ ಮಾಡಿದ್ರೆ ಫಿಟ್ನೆಸ್ ಮೈಂಟೇನ್ ಮಾಡ್ತಾ ಕಾಮ್ ಆಗಿ ಕೂಡಾ ಇರ್ಬೋದು ಅಂತಾರೆ. ಫ್ಯಾಮಿಲಿ ಮುಖ್ಯ ಅನಂತರ ಸಿನಿಮಾ ಅನ್ನೋ ಲೈಫ್ ಪಾಲಿಸಿ ಇವರದ್ದು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ ಕನ್ನಡ ಚಿತ್ರಗಳು – These new Kannada movies are available on OTT

ಈ ವೀಕೆಂಡ್ ಗೆ ಸಿನಿಮಾ ನೋಡೋ ಪ್ಲ್ಯಾನ್ ಇದೆಯಾ? ಒಟಿಟಿಯಲ್ಲಿವೆ ಈ...

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ – The Remarkable Journey of “Toxic”

ವಿವಾದದ ನಡುವೆ ಸದ್ದು ಮಾಡುತ್ತಿದೆ “ಟಾಕ್ಸಿಕ್”, ಗಮನ ಸೆಳೆಯುವಂತಿದೆ ಯಶಸ್ಸಿನ ಜರ್ನಿ ಸಾಮಾನ್ಯ...

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – How to submit your short film to a film festival

ನಿಮ್ಮ ಶಾರ್ಟ್‌ಫಿಲ್ಮ್‌ನ್ನು ಫಿಲ್ಮ್ ಫೆಸ್ಟಿವಲ್‌ಗೆ ಹೇಗೆ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್! – Are You Looking for a song to make Reels? These songs are in great...

ರೀಲ್ಸ್ ಮಾಡಲು ಹಾಡು ಹುಡುಕುತ್ತಿದ್ದೀರಾ? ಈ ಹಾಡುಗಳಿಗೆ ಇದೆ ಸಖತ್ ಡಿಮ್ಯಾಂಡ್!...